1879-1960. ಜರ್ಮನಿಯ ಭೌತವಿಜ್ಞಾನಿ. ಎಂಟ್ರೊಪಿ ಪರಿಕಲ್ಪನೆಯನ್ನು ದ್ಯುತಿವಿಜ್ಞಾನಕ್ಕೆ (ಆಪ್ಟಿಕ್ಸ್) ಅನ್ವಯಿಸಿದ. ಹರಿವ ನೀರಿನಲ್ಲಿ ಬೆಳಕಿನ ವೇಗ ಕುರಿತ ಸೂತ್ರ ಐನ್‍ಸ್ಟೈನ್ ತಮ್ಮ ವಿಶೇಷ ಸಾಪೇಕ್ಷತಾ ಸಿದ್ಧಾಂತದಲ್ಲಿ(1905) ಪ್ರತಿಪಾದಿಸಿದ ಪ್ರಕಾರವೇ ಇದೆಯೆಂದು ರುಜುವಾತಿಸಿದ. ಸ್ಫಟಿಕಗಳಲ್ಲಿರುವ ಪರಮಾಣುಗಳು ಹೇಗೆ ಎಕ್ಸ್ ಕಿರಣಗಳನ್ನು ವಿವರ್ತಿಸುತ್ತವೆ ಎಂಬ ವಿದ್ಯಮಾನವನ್ನು ಆವಿಷ್ಕರಿಸಿದ (1912). ಈ ಆವಿಷ್ಕಾರ ಈತನಿಗೆ ನೊಬೆಲ್ ಪಾರಿತೋಷಿಕ  ತಂದುಕೊಟ್ಟಿತು(1914). ಜ಼ೂರಿಕ್ (1912), ಫ್ರ್ಯಾಂಕ್‍ಫರ್ಟ್ (1914) ಮತ್ತು ಬರ್ಲಿನ್ (1919) ನಗರಗಳ ವಿಶ್ವವಿದ್ಯಾಲಯಗಳಲ್ಲಿ ಸೇವೆಸಲ್ಲಿಸಿದ್ದ. ಬರ್ಲಿನ್-ಡಲ್‍ಹೆಲ್ಮ್‍ನಲ್ಲಿದ್ದ (ತತ್ಪೂರ್ವದ) ಕೈಸರ್ ವಿಲ್‍ಹೆಲ್ಮ್ ಇನ್‍ಸ್ಟಿಟ್ಯೂಟ್ ಫಾರ್ ಫಿಸಿಕ್ಸ್‍ನ ನಿರ್ದೇಶಕನಾಗಿ 71ನೆಯ ವಯಸ್ಸಿನಲ್ಲಿ ನೇಮಕಗೊಂಡ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ